ಮಾರ್ಚ್‌ನಲ್ಲಿ ‘ನಿತ್ಯ ಜೊತೆ ಸತ್ಯ
Posted date: 25 Thu, Feb 2016 – 04:35:58 PM

ಭಾಗ್ಯಲಕ್ಷ್ಮೀ ಕ್ರಿಯೇಷನ್ಸ್ ಲಾಂಛನದಲ್ಲಿ ಮಲ್ಲಿಕಾರ್ಜುನ ರೆಡ್ಡಿ ಅವರು ನಿರ್ಮಿಸಿರುವ ‘ನಿತ್ಯ ಜೊತೆ ಸತ್ಯ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಮಾರ್ಚ್‌ನಲ್ಲಿ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಆಡಿಯೋ ಸೀಡಿ ಬಿಡುಗಡೆಯಾಗಿದ್ದು ಕೇಳುಗರ ಮನ ಗೆದ್ದಿದೆ.
ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ೩೨ದಿನಗಳ ಚಿತ್ರೀಕರಣ ನಡೆದಿದೆ. ಶ್ರೀನಾಗ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಕಲ್ಯಾಣ್ ಸಾಮಿ ಅವರ ಛಾಯಾಗ್ರಹಣವಿದೆ. ರಘುರಾಂ ಸಂಗೀತ ನಿರ್ದೇಶನದ ಈ ಚಿತ್ರದ ತಾರಾಬಳಗದಲ್ಲಿ ಮನೀಶ್‌ಬಾಬು, ತೇಜಸ್ವಿನಿ, ದೇವರಾಜ್, ದಿನೇಶ್, ನಿವಾಸ್, ಆಶಾ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed